ಶೇ 33 ಮಹಿಳಾ ಮೀಸಲಾತಿ ಕಲ್ಪಿಸುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ, ಮಸೂದೆ ಪರವಾಗಿ 454 ಸಂಸದರು
1717 views
news ವಿಡಿಯೋಗಳಿಗೆ ಚಂದಾದಾರರಾಗಿಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲೆ ಸುದೀರ್ಘ ಎಂಟು ತಾಸು ಚರ್ಚೆ ನಡೆದು ಮತಕ್ಕೆ ಹಾಕಲಾಯಿತು. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ 'ನಾರಿ ಶಕ್ತಿ ವಂದನಾ ಅಧಿನಿಯಮ 2023' ಮಸೂದೆಗೆ ಪರ-ವಿರೋಧ ಮತದಾನ ನಡೆಸಲಾಯಿತು. ಮತಗಳ ಆಧಾರದ ಮೇಲೆ ಮಸೂದೆಯು ಅಂಗೀಕಾರಗೊಂಡಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಮತಕ್ಕೆ ಹಾಕುವ ಘೋಷಣೆ ಮಾಡಿದರು. ಸಂಸದರಿಗೆ ಆಯ್ಸ್ (ಹೌದು) ಅಂಡ್ ನೋಸ್ (ಇಲ್ಲ) ಸ್ಲಿಪ್ ನೀಡಲಾಯಿತು. ಅದರಲ್ಲಿ ಮಸೂದೆಗೆ ಪರ ಅಥವಾ ವಿರೋಧವಾಗಿ ಮತವನ್ನು ಹಾಕಿ, ಹೆಸರು ಮತ್ತು ಐಡಿ ಕಾರ್ಡ್ ಸಂಖ್ಯೆ ಇತರೆ ವಿವರವನ್ನು ಸಂಸದರು ನಮೂದಿಸಿ ಅಧಿಕಾರಿಗಳಿಗೆ ಕೊಟ್ಟರು. ಆ ಪ್ರಕಾರವಾಗಿ ಮಸೂದೆಯ ಪರವಾಗಿ ಹೆಚ್ಚಿನ ಮತಗಳು ಬಿದ್ದಿದ್ದರಿಂದ ಸಂವಿಧಾನದ 128ನೇ ತಿದ್ದುಪಡಿಯು ಅನುಮೋದನೆ ಗೊಂಡಿದೆ.
454 ಸಂಸದರು ಮಸೂದೆಯ ಪರವಾಗಿ ಮತ ಚಲಾಯಿಸಿದದ್ದು, ಮಸೂದೆಯನ್ನು ವಿರೋಧಿಸಿ ಇಬ್ಬರು ಸಂಸದರು ಮತ ಹಾಕಿದ್ದಾರೆ. ರಾಜ್ಯಸಭೆಯಲ್ಲಿ ಗುರುವಾರ ಮಹಿಳಾ ಮೀಸಲು ಮಸೂದೆಯ ಚರ್ಚೆ ನಡೆಯಲಿದೆ.