'ಹಾಡು ಹಳತು ಭಾವ ನವೀನ' ಸರಣಿ ಭಾಗ-1: 'ಹಾಡು ಹಳೆಯದಾದರೇನು...' ಕವನದ ಆಳ-ಅಗಲ ಇಲ್ಲಿದೆ
1273 views
news ವಿಡಿಯೋಗಳಿಗೆ ಚಂದಾದಾರರಾಗಿನಮ್ಮ ರಾಷ್ಟ್ರಕವಿ ಡಾ.ಜಿ.ಎಸ್.ಎಸ್ ಅಥವಾ ಡಾ.ಜಿ.ಎಸ್.ಶಿವರುದ್ರಪ್ಪ'ನವರ ಅನೇಕಾನೇಕ ಕೃತಿಗಳು ಎಲ್ಲರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಕುಳಿತಿದೆ. ಇವರ ಅನೇಕ ಕವನಗಳಲ್ಲಿ ಒಂದು ಕವನ ಇಂದಿನ ಆಯ್ಕೆ ಅದುವೇ "ಹಾಡು ಹಳೆಯದಾದರೇನು ಭಾವ ನವನವೀನ". ಲೇಖಕ ಶ್ರೀನಾಥ್ ಭಲ್ಲೆ ಅವರು ಈ ಹೊಸ ಸರಣಿಯಲ್ಲಿ ಕವನಗಳ ವಿವರಣೆ ನೀಡುತ್ತಿದ್ದಾರೆ.
ಹಾಡು ಹಾಡು ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಈ ಕವನಕ್ಕೆ ನಾನಾರೂಪ. ಮೊದಲ ರೂಪ ಪ್ರಕೃತಿ. 'ಯುಗಯುಗಾದಿ ಕಳೆದರೂ' ಎಂಬ ಕವನದಲ್ಲಿ ಅಜ್ಜರು ಹೇಳಿರುವಂತೆ “ವರುಷಕೊಂದು ಹೊಸತು ಜನ್ಮ” ವು ಈ ಹಸಿರು ಜೀವಜಾತಿಗೆ. ವರುಷಗಳು ಉರುಳಿದಂತೆ ಗಿಡಮರಗಳ ವಯಸ್ಸು ಏರಿದರೂ ಪ್ರತೀ ವರುಷವೂ ಅದರ ಸೊಬಗು ಮಾತ್ರ ಕಡಿಮೆಯಾಗುವುದಿಲ್ಲ. ಈ ಪ್ರಕೃತಿ ಸೌಂದರ್ಯವನ್ನು ಹಾಡಿಗೆ ಹೋಲಿಸಿದರೆ, ಈ ಹಾಡಿಗೆ ವಯಸ್ಸು ಏರಿದಂತೆ ಸೊಬಗಿಗೇನೂ ಕೊರತೆ ಇಲ್ಲ. ಹೆಚ್ಚಿನ ವೇಳೆ ವಯಸ್ಸು ಏರಿದಂತೆ ಅದರ ಫಲಪುಷ್ಪಗಳೂ ಹೆಚ್ಚುತ್ತದೆ. “ಹಾಡು ಹಳೆಯದಾದರೂ ಭಾವ ಮಾತ್ರ ನವನವೀನ”. ಕಾಡುಮೇಡುಗಳಲ್ಲಿ, ಮನೆ ಮನೆಗಳಲ್ಲಿ, ತೋಟಗಳಲ್ಲಿ, ಪೊದೆಗಳಲ್ಲಿ ಯಾವ ಹಮ್ಮುಬಿಮ್ಮು ಇಲ್ಲದೆ ಅರಳಿ ನಿಂತು ಸಂತಸ ಹಂಚುವುದೇ ಈ ಗಿಡಮರಗಳ ಕೆಲಸಕಾರ್ಯ. ಪ್ರತೀ ವರುಷವೂ ಆ ಹಿಂದಿನ ವರುಷದಂತೆ ಹಳೆಯ ಹಾಡನ್ನೇ ಹಾಡುತ್ತಾ ನಲಿದು ಹೊಸತು ಜೀವ ತಳೆದು ಜೀವಿಸುತ್ತದೆ. ಮನುಜನ ಹಾಡು ಮಾತ್ರ ಏಕಮುಖ. ವಯಸ್ಸು ಮತ್ತು ಆಸಕ್ತಿ ವಿರುದ್ಧ ದಿಕ್ಕುಗಳಲ್ಲಿ ಸಾಗುತ್ತದೆ.