2023ರ ವಿಶ್ವಕಪ್ಗೆ ಕಪ್ಪು ಚುಕ್ಕೆಯಾದ ವಿವಾದಗಳು!
2054 views
sports ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಂತಿಮ ಹಂತದಲ್ಲಿದೆ. ಟೂರ್ನಿಯಲ್ಲಿ ಕೆಲ ತಂಡಗಳಿಂದ ಅದ್ಭುತ ಪ್ರದರ್ಶನಗಳು ಮೂಡಿಬಂದಿವೆ, ಕೆಲ ತಂಡಗಳು ಭಾರಿ ನಿರಾಶೆ ಮೂಡಿವೆ. ಅಂದಹಾಗೆ ಈ ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೆಲ ವಿವಾದಗಳು ಕೂಡ ಭಾರಿ ಸದ್ದು ಮಾಡಿ, ಅದ್ಧೂರಿಯಾಗಿ ಮೂಡಿಬಂದಿರುವ ಟೂರ್ನಿಗೆ ಕಪ್ಪು ಚುಕ್ಕೆಯಂತ್ತಾಗಿವೆ. ಅದರಲ್ಲೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಸಾಲು-ಸಾಲು ಕ್ಷುಲ್ಲಕ ಆರೋಪಗಳನ್ನು ಮಾಡಿದ್ದರೆ, ಡಿಆರ್ಎಸ್ ಮತ್ತು ಅಂಪೈರ್ ಕಾಲ್ ನಿಯಮಗಳ ವಿರುದ್ಧವೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಏಂಜೆಲೋ ಮ್ಯಾಥ್ಯೂಸ್ ಅವರನ್ನು ಟೈಮ್ಡ್ ಔಟ್ ಮಾಡಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಇಲ್ಲಿ ವಿವರಿಸಲಾಗಿದೆ.