Income Tax Scam: ಐಟಿ ರಿಟರ್ನ್ಸ್ ವಂಚನೆ ಕುರಿತು ಗಮನವಿರಲಿ..
1008 views
ಟೆಕ್ನಾಲಜಿ ವಿಡಿಯೋಗಳಿಗೆ ಚಂದಾದಾರರಾಗಿಡಿಜಿಟಲ್ ಪೇಮೆಂಟ್ ಯುಗದಲ್ಲಿ ಕಳ್ಳರು ಕೂಡ ಡಿಜಿಟಲ್ ಮಾರ್ಗ ಹಿಡಿದಿದ್ದು, ವಿವಿಧ ರೀತಿಯ ನವೀನ ತಂತ್ರಗಳ ಮೊರೆಹೋಗುತ್ತಿದ್ದಾರೆ. ಸೈಬರ್ ವಂಚಕರು ಇತ್ತೀಚೆಗೆ ಆದಾಯ ತೆರಿಗೆ ರಿಟರ್ನ್ಸ್ ಎಂಬ ಹೆಸರಿನಲ್ಲಿ ಎಸ್ಎಂಎಸ್ ಕಳುಹಿಸುವುದು, ಇ ಮೇಲ್ ಸೃಷ್ಟಿಸಿ ಕಳುಹಿಸುವ ಮೂಲಕ ಜನರನ್ನು ಮೋಸಮಾಡುತ್ತಿದ್ದಾರೆ. ಆದಾಯ ತೆರಿಗೆ ವಿನಾಯಿತಿ ಪಡೆಯುವ ಹೆಸರಿನಲ್ಲಿ ಜನಸಾಮಾನ್ಯರು ಸುಲಭದಲ್ಲಿ ಐಟಿ ರಿಟರ್ನ್ಸ್ ವಂಚನೆಗೆ ಸಿಲುಕುತ್ತಿದ್ದಾರೆ. ಆದರೆ ನೆನಪಿಡಿ, ಯಾವುದೇ ಕಾರಣಕ್ಕೂ ಬ್ಯಾಂಕ್ ಅಧಿಕಾರಿಗಳು ಫೋನ್ ಮಾಡಿ ಇಲ್ಲವೆ ಎಸ್ಎಂಎಸ್, ಇ ಮೇಲ್ ಕಳುಹಿಸಿ ನಿಮ್ಮ ವೈಯಕ್ತಿಕ ವಿವರ, ಬ್ಯಾಂಕ್, ಆಧಾರ್ ಮತ್ತು ಪ್ಯಾನ್ ಕಾರ್ಡ್ ದಾಖಲೆ ಕೇಳುವುದಿಲ್ಲ. ಹೀಗಾಗಿ ಅಧಿಕಾರಿಗಳ ಹೆಸರಿನಲ್ಲಿ ಕರೆಬಂದರೆ, ವಿವರ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ. ನಿಮ್ಮ ಎಚ್ಚರಿಕೆ, ಉಚಿತ ಮತ್ತು ಉಡುಗೊರೆಯ ದುರಾಸೆಯಿಂದ ದೂರವಿದ್ದರೆ, ಹ್ಯಾಕರ್ಗಳು ಹಾಗೂ ವಂಚನೆಯ ಜಾಲದಿಂದ ದೂರವಿರಬಹುದು.