ದೆಹಲಿ ಮೆಟ್ರೋ ರೈಲಿನಲ್ಲಿ ಕೋತಿಯೊಂದು ಪ್ರಯಾಣ ಮಾಡಿದೆ. ಶನಿವಾರ ಸೆರೆಯಾದ ಈ ದೃಶ್ಯ ಈಗ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ತಮ್ಮೊಂದಿಗೆ ಕೋತಿ ಕೂಡಾ ಪ್ರಯಾಣ ಮಾಡುವುದನ್ನು ಕಂಡು ಪ್ರಯಾಣಿಕರು ಕೂಡಾ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದರು. ಸದ್ಯ ವೈರಲ್ ಆಗುತ್ತಿರುವ ಕ್ಲಿಪ್ನಲ್ಲಿ ಈ ಕೋತಿ ಬೋಗಿಯ ತುಂಬಾ ಅತ್ತಿಂದಿತ್ತ ಓಡುತ್ತಾ, ನೇತಾಡುತ್ತಿರುವ ದೃಶ್ಯವಿದೆ. ಬಳಿಕ ಪ್ರಯಾಣಿಕರೊಬ್ಬರ ಪಕ್ಕ ಬಂದು ಕುಳಿತುಕೊಳ್ಳುವ ಕೋತಿ ಕುತೂಹಲದಿಂದ ಹೊರಗಡೆ ಇಣುಕುವುದನ್ನೂ ಇಲ್ಲಿ ನೋಡಬಹುದಾಗಿದೆ.