ಕಿರಣ್ ರಾಜ್ 'ರಾನಿ' ಟೀಸರ್ಗೆ ಧ್ವನಿ ಕೊಟ್ಟಿದ್ದು ಇವ್ರೇ..
1167 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರಿನ ವಿಕ್ಟರಿ ಸಿನಿಮಾ ಥಿಯೇಟರ್ನಲ್ಲಿ ನಟ ಕಿರಣ್ ರಾಜ್ ಅವರ 'ರಾನಿ' ಸಿನಿಮಾ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಈ ವೇಳೆ 'ರಾನಿ' ಟೀಸರ್ಗೆ ಯಾರು ಧ್ವನಿ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೆ ಆ ವೇದಿಕೆಯಲ್ಲಿಯೇ ಉತ್ತರ ಸಿಕ್ಕಿದೆ. 'ರಾನಿ' ಟೀಸರ್ಗೆ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಧ್ವನಿ ಕೊಟ್ಟಿದ್ದಾರಂತೆ.ನಟ ಕಿರಣ್ ರಾಜ್ ಅವರಿಗೆ ಸಿಗುತ್ತಿರುವ ಚಪ್ಪಾಳೆ, ಶಿಳ್ಳೆ ಕೇಳಿದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು, "ನನಗೆ ಕಿರಣ್ ರಾಜ್ಗೆ ಸಿಗುತ್ತಿರುವ ಶಿಳ್ಳೆ, ಚಪ್ಪಾಳೆ ನೋಡಿದ್ರೆ ತುಂಬ ಹೊಟ್ಟೆ ಕಿಚ್ಚು ಆಗತ್ತೆ. ನಾವು ಇಷ್ಟುದಿನ ತೆರೆ ಹಿಂದೆ ಕೆಲಸ ಮಾಡಿಕೊಂಡು ಬಂದ್ವಿ, ನಮಗೆ ಇದೆಲ್ಲ ಸಿಗಲಿಲ್ಲ ಅಂತ. ಆದರೆ ಈ ಸಿನಿಮಾದಿಂದ ನಮಗೂ ಶಿಳ್ಳೆ ಚಪ್ಪಾಳೆ ಸಿಗತ್ತೆ ಅನಿಸುತ್ತಿದೆ" ಎಂದು ಹೇಳಿದ್ದಾರೆ.'ರಾನಿ' ಸಿನಿಮಾಕ್ಕೆ ಗುರುತೇಜ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಳಿಗೆ ಪ್ರಮೋದ್ ಮರವಂತೆ ಅವರು ಹಾಡು ಬರೆದಿದ್ದಾರೆ. ಆದಷ್ಟು ಬೇಗ 'ರಾನಿ' ಸಿನಿಮಾ ತೆರೆಗೆ ಅಪ್ಪಳಿಸಲಿದೆಯಂತೆ.
'ರಾನಿ' ಕನಸಿನ ಹಿಂದೆ ತುಂಬ ನೋವಿದೆ- ನಟ ಕಿರಣ್ ರಾಜ್
'ರಾನಿ' ಕನಸಿನ ಹಿಂದೆ ತುಂಬ ನೋವಿದೆ- ನಟ ಕಿರಣ್ ರಾಜ್